ನನ್ನ ಗಂಡ ಸೆಕ್ಸ್‍ನಲ್ಲಿ ಜಾಸ್ತಿ ಅವರೇ ಆ್ಯಕ್ಟಿವ್ ಆಗಿರುತ್ತಾರೆ. ಮದುವೆಯಾದ ಹೊಸತರಲ್ಲಿ ನಾನು ಅವರಿಗಿಂತ ಜಾಸ್ತಿ ಆ್ಯಕ್ಟಿವ್ ಆಗಿರುತ್ತಿದ್ದೆ. ನಾನೇ ಮೊದಲೇ ಅವರನ್ನು ಚುಂಬಿಸುವುದು, ಮುದ್ದಾಡುವುದು, ನಾನೇ ಮೊದಲಾಗಿ ಉದ್ರೇಕಿಸುವುದು ಮಾಡುತ್ತಿದ್ದೆ. ಆದರೆ ಒಂದು ದಿನ ಅವರು ನನ್ನಲ್ಲಿ `ನಿನಗೆ ಅನುಭವ ಉಂಟಾ?’ ಎಂದು ಕೇಳಿ ಸುಮ್ನೆ ನಕ್ಕು ಬಿಟ್ಟರು. ಅಲ್ಲಿಂದ ನಂತರ ನಾನೇ ಮೊದಲಾಗಿ ಸೆಕ್ಸ್ ಮಾಡಲು ಹೋಗುವುದಿಲ್ಲ. ನಾನು ಬಾಲ್ಯದಲ್ಲಿ ಕೂಡಿದ ಅವರಿಗೆ ಗೊತ್ತಾಗಿರಬಹುದೇ? ನನಗೆ ಅವರನ್ನು ಉದ್ರೇಕಿಸಲು ಆಸೆ. ಅವರು ತಪ್ಪಾಗಿ ಅರ್ಥೈಸಿದರೆಂಬ ಕಾರಣಕ್ಕೆ ಸಂಕೋಚ ಎನಿಸುತ್ತದೆ. ದಯವಿಟ್ಟು ಪರಿಹಾರ ಕೊಡಿ.
ಸಲಹೆ: ನಿಮ್ಮ ಬಾಲ್ಯದಲ್ಲಿ ನಡೆದ ಘಟನೆಗೂ ಈಗ ಮದುವೆಯಾಗಿರುವ ಘಟನೆಗೂ ಯಾವುದೇ ತಾಳೆಯಾಗುವುದಿಲ್ಲ. ಬಾಲ್ಯದಲ್ಲಿ ನಿಮ್ಮ ಯೋನಿಯಲ್ಲಿ ಬೆಳವಣಿಗೆ ಕಾಣದಿದ್ದು, ಬಿಗುವಾಗಿರುವುದರಿಂದ ಸಂಭೋಗ ನಡೆಯಲಿಲ್ಲ. ಅದಕ್ಕಾಗಿ ವಿನಾಕಾರಣ ಚಿಂತೆ ಅನಗತ್ಯ. ಕೆಲವರು ಬಾಲ್ಯದಲ್ಲಿ ಕುತೂಹಲಕ್ಕಾಗಿ ಈ ರೀತಿ ಮಾಡುತ್ತಾರೆ. ಈ ವಿಷಯ ನಿಮ್ಮ ಗಂಡನಿಗೆ ಗೊತ್ತಾಗಿರಲು ಛಾನ್ಸೇ ಇಲ್ಲ.
ನಿಮ್ಮ ಗಂಡ ನಿಮ್ಮಲ್ಲಿ ಅನುಭವ ಉಂಟಾ ಎಂದು ಯಾವುದೋ ತಮಾಷೆಗೆಂದು ಕೇಳಿರಬಹುದು. ಅದನ್ನೇ ದೊಡ್ಡದಾಗಿ ಮಾಡಿಕೊಂಡು ತಲೆಕೆಡಿಸಿಕೊಳ್ಳಬೇಡಿ. ಈ ವಿಚಾರ ಇಟ್ಟುಕೊಂಡು ವಿವಾದಕ್ಕೆ ಆಸ್ಪದ ನೀಡಬೇಡಿ.
ಪುರುಷ ರತಿಯಲ್ಲಿ ಯಾವಾಗಲೂ ಆ್ಯಕ್ಟೀವ್ ಪಾರ್ಟ್ ತೆಗೆದುಕೊಳ್ಳುತ್ತಾನೆ. ಹೆಂಡತಿಯನ್ನು ಆಲಂಗಿಸಿ ಕೊಳ್ಳುವುದು, ಮುದ್ದಾಡುವುದು, ಉದ್ರೇಕಗೊಳಿಸುವುದು, ಸಂಭೋಗ ಮಾಡುವುದು ಹಾಗೂ ಎಲ್ಲದರಲ್ಲೂ ಆ್ಯಕ್ಟೀವ್ ಆಗಿ ಇರುತ್ತಾನೆ. ತಾನು ರತಿ ವಿಷಯದಲ್ಲಿ ಎಷ್ಟು ಹೆಚ್ಚಾಗಿ ಆ್ಯಕ್ಟೀವ್ ಆಗಿ ಪಾರ್ಟ್ ತೆಗೆದು ಕೊಳ್ಳುತ್ತಾನೋ ಅಷ್ಟೋ ಹೆಚ್ಚಾಗಿ ಪತ್ನಿ ಸಹ ತೆಗೆದು ಕೊಳ್ಳಬೇಕೆಂದು ಆಶಿಸುತ್ತಾನೆ. ಆಕೆ ಸಹ ಆಲಂಗಿಸಿಕೊಳ್ಳಬೇಕು, ಚುಂಬಿಸಬೇಕು, ಉದ್ರೇಕ ಗೊಳಿಸುವ ಮಾತುಗಳನ್ನು ಆಡಬೇಕೆಂದು, ತನಗೆ ರತಿಯಲ್ಲಿ ಎಷ್ಟು ಆಸಕ್ತಿಯಿದೆ ಎನ್ನುವುದನ್ನು ಚೇಷ್ಟೆಗಳ ಮೂಲಕ ಅಭಿವ್ಯಕ್ತಗೊಳಿಸಬೇಕೆಂದು, ಬೇರೆ ಬೇರೆ ರತಿ ಭಂಗಿಗಳ ವಿಷಯದಲ್ಲೂ ಆಕೆ ಆಸಕ್ತಿ ತೋರಿಸಬೇಕೆಂದು ಪುರುಷ ಆಶಿಸುತ್ತಾನೆ. ನಿಜವಾಗಲೂ ಸ್ತ್ರೀ ಆ್ಯಕ್ಟೀವ್ ಪಾರ್ಟ್ ತೆಗೆದುಕೊಂಡು ಹಾಗೇ ವ್ಯವಹರಿಸಿದರೆ ಪುರುಷನಲ್ಲಿ ಎಲ್ಲಿಲ್ಲದ ಕಾಮ ಉಂಟಾಗುತ್ತದೆ. ಇದರಿಂದ ಲೈಂಗಿಕ ಸಾಮಥ್ರ್ಯ ಒಂದಕ್ಕಿಂತಲೂ ಹತ್ತರಷ್ಟ ಹೆಚ್ಚಾಗುತ್ತದೆ. ರತಿಯಲ್ಲಿ ಯಾವಾಗಲೂ ಪುರುಷನೇ ಆ್ಯಕ್ಟೀವ್ ಪಾರ್ಟ್ ತೆಗೆದುಕೊಂಡು, ಸ್ತ್ರೀ ಕೇವಲ ಸ್ತಬ್ಧಳಾಗಿದ್ದರೆ ಸ್ವಲ್ಪದ ದಿನಗಳ ನಂತರ ರತಿಯ ಬಗ್ಗೆ ಆಸಕ್ತಿ ಕಡಿಮೆಯಾಗುವ ಸಾಧ್ಯತೆ ಇದೆ.
ಅಷ್ಟೇ ಅಲ್ಲದೆ, ಸೆಕ್ಸ್ ವಿಷಯದಲ್ಲಿ ಗಂಡನ ಸೈಕಾಲಜಿಯನ್ನು ತಿಳಿದುಕೊಂಡ, ಪತ್ನಿ ಸಹ ಆ್ಯಕ್ಟೀವ್ ಪಾರ್ಟ್ ತೆಗೆದುಕೊಂಡರೆ ಸೆಕ್ಸ್ ವಿಷಯದಲ್ಲಿ ಶೀತಲತೆ ಉಂಟಾಗುವುದಿಲ್ಲ. ಆದ್ದರಿಂದ ನಿಮ್ಮ ಗಂಡನಲ್ಲಿ ನಿಮಗೆ ಬೇಕಾದಂತೆ ಸೆಕ್ಸ್ ಅಪೇಕ್ಷಿಸುವುದರಲ್ಲಿ ತಪ್ಪಿಲ್ಲ. ದಂಪತಿಯಲ್ಲಿ ಯಾವಾಗಲೂ ಮನಮುಕ್ತತೆ ಇರಬೇಕು. ಇಬ್ಬರೂ ಸ್ನೇಹಿತರಂತೆ ಭಾವಿಸಿ, ಸೆಕ್ಸ್‍ನಲ್ಲಿ ಭಾಗಿಯಾದರೆ ಸಂತೃಪ್ತ ಜೀವನ ನಡೆಸಬಹುದು. ಸಂಕೋಚ, ಮುಚ್ಚುಮರೆ ಇಟ್ಟುಕೊಂಡರೆ ಅದರಿಂದ ಒಂದಲ್ಲಾ ಒಂದು ದಿನ ಸಮಸ್ಯೆ ಉಂಟಾಗುತ್ತದೆ.
ಅರೆನಗ್ನ ಉಡುಪು ಧರಿಸುವುದರಿಂದ ಅತ್ಯಾಚಾರಕ್ಕೆ ಪ್ರೇರಣೆ ಸಿಗುವುದು ನಿಜವೇ..??
ಸಮಸ್ಯೆ: ನಾನೊಬ್ಬಳು ವಿದ್ಯಾರ್ಥಿನಿ. ಇತ್ತೀಚೆಗೆ ಹೆಚ್ಚಿನ ಹುಡುಗಿಯರು ಅರೆನಗ್ನರಾಗಿ ಉಡುಪು ಧರಿಸುತ್ತಾರೆ. ಅರೆನಗ್ನರಾಗಿ ಉಡುಪು ಧರಿಸುವುದರಿಂದ ಅತ್ಯಾಚಾರಕ್ಕೆ ಪ್ರೇರಣೆ ಸಿಗುವುದು ನಿಜವೇ? ಪುರುಷರೂ ಕೂಡಾ ಅರೆನಗ್ನರಾಗಿ ವರ್ತಿಸುತ್ತಾರೆ. ಸ್ತ್ರೀಯರಿಗಿರುವ ನಿಬಂಧನೆ ಪುರುಷರಿಗೇಕಿಲ್ಲ? ಸ್ತ್ರೀಯರು ಅರೆನಗ್ನರಾಗಿ ಉಡುಪು ಧರಿಸುವುದು ಖಾಯಿಲೆಯೇ? ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ಉತ್ತಮ ಪ್ರಶ್ನೆ. ಒಬ್ಬಳು ಯುವತಿ ಅಥವಾ ಯುವಕ ತನ್ನ ದೇಹವನ್ನು ಅರೆನಗ್ನರಾಗಿ ಪ್ರದರ್ಶಿಸುವುದು ಸಾಮಾನ್ಯವಾಗಿ ಖಾಯಿಲೆ ಎಂದು ಪರಿಗಣಿತವಾಗಿಲ್ಲ. ಆದರೆ ಅದು ಅತಿಯಾದರೆ ಅದು ಮಾನಸಿಕ ವಿಕಲತೆಯಾಗುತ್ತದೆ. ಒಬ್ಬಳು ಹುಡುಗಿ ತನ್ನನ್ನು ಹುಡುಗನೊಬ್ಬ ಗುರುತಿಸಬೇಕೆಂಬ ನಿಟ್ಟಿನಲ್ಲಿ ಅರೆನಗ್ನವಾಗಿ ಉಡುಪು ಧರಿಸಿ ಪುರುಷನನ್ನು ಆಕರ್ಷಿಸುತ್ತಾಳೆ. ಇದು ಲೈಂಗಿಕ ಅಭಿವ್ಯಕ್ತಿ, ಪ್ರಕೃತಿ ಸಹಜ ಗುಣ. ಗಂಡುಗೀಜುಗ ಪಕ್ಷಿಯೊಂದು ಸುಂದರವಾದ ಗೂಡು ಕಟ್ಟಿ ಹೆಣ್ಣು ಗೀಜುಗ ಪಕ್ಷಿಯನ್ನು ಆಕರ್ಷಿಸುತ್ತದಲ್ಲವೇ?. ಆದ್ದರಿಂದ ಇದು ಕೂಡಾ ಒಂದು ಲೈಂಗಿಕ ಅಭಿವ್ಯಕ್ತಿ ಹಾಗೂ ಅದರ ಪ್ರಕೃತಿ ಸಹಜ ಗುಣ. ಸಾಮಾನ್ಯವಾಗಿ ಅರೆನಗ್ನವಾಗುವುದು ಒಂದು ಚಟ ಅಷ್ಟೆ. ಮನಃಶಾಸ್ತ್ರದ ಪ್ರಕಾರ ಪ್ರದರ್ಶನ ರೋಗ ಅಥವಾ ಎಕ್ಸಿಬಿಷಾನಿಸಂ ಡಿಸಾರ್ಡರ್ ಎಂಬ ಮಾನಸಿಕ ಸಮಸ್ಯೆ ಇರುತ್ತದೆ. ಇಂಥವರು ಮೈಪೂರ್ತಿ ಉಡುಪು ಧರಿಸಿದ್ದರೂ ಕೂಡಾ, ಸಾರ್ವಜನಿಕ ಸ್ಥಳದಲ್ಲಿ ಕೆಲವೊಮ್ಮೆ ತನ್ನ ಜನನಾಂಗವನ್ನು ಪ್ರದರ್ಶಿಸುವ ವಿಕೃತ ಮನೋಭಾವವನ್ನು ವ್ಯಕ್ತಪಡಿಸುತ್ತಾರೆ. ಇದರಿಂದ ಕೆಲವರಿಗೆ ತುಂಬಾ ರೇಜಿಗೆ ಉಂಟಾಗುತ್ತದೆ. ಇಂಥವರು ನೋಡಲು ಶಿಸ್ತುಬದ್ಧರಾಗಿರುವಂತೆ ಕಂಡುಬಂದರೂ, ತನ್ನ ಜನನಾಂಗವನ್ನು ತೋರಿಸುತ್ತಾ ವಿಕೃತವಾಗಿ ಲೈಂಗಿಕ ತೃಪ್ತಿ ಹೊಂದುತ್ತಾರೆ. ಇನ್ನೊಂದು ಬಾಡಿ ಡಿಸ್ಫಾರ್ಮಿಕ್ ಡಿಸಾರ್ಡರ್ (ಬಿಡಿಡಿ) ಎಂದು ಕರೆಯಲ್ಪುಡುವ ಮನೋಸಮಸ್ಯೆಯೊಂದಿರುತ್ತದೆ. ಇವರು ತನ್ನ ದೇಹದಲ್ಲಿ ಯಾವುದಾದರೂ ಊನತೆ ಇದ್ದರೆ ಅದರ ಬಗ್ಗೆ ಕೊರಗುತ್ತಾ, ಅದನ್ನು ಆಗಾಗ ಕನ್ನಡಿಯಲ್ಲಿ ನೋಡುತ್ತಾ ಮಾನಸಿಕ ಸಮಸ್ಯೆಯಿಂದ ಬಳಲುತ್ತಾರೆ. ಕೆಲವರಿಗೆ ತಾನು ಸುಂದರವಿಲ್ಲ, ತನ್ನನ್ನು ಯಾರೂ ಕೂಡಾ ನೋಡುವುದಿಲ್ಲ ಎಂಬ ಭಾವನೆ ಇರುತ್ತದೆ. ಇದನ್ನು ನೀಗಿಸಲು ಬೇರೆ ಬೇರೆ ವರ್ತನೆಯನ್ನು ತೋರುತ್ತಾರೆ. ಮೈಕಲ್ ಜಾಕ್ಸನ್‍ಗೆ ಇದ್ದದ್ದು ಇದೇ ಕಾಯಿಲೆ. ತಾನು ಸುಂದರವಾಗಿಲ್ಲ ಎಂಬ ಭಾವನೆಯಿಂದ ಏನೆಲ್ಲಾ ಕಸರತ್ತು ನಡೆಸುತ್ತಾರೆ. ಕಿವಿಗೆ ರಿಂಗ್ ಇಡುವುದು, ದೇಹಕ್ಕೆಲ್ಲಾ ಅಲ್ಲಲ್ಲಿ ಚುಚ್ಚಿಕೊಳ್ಳುವುದು, ಅರೆನಗ್ನ ಸ್ಥಿತಿಯ ಉಡುಪು ಧರಿಸುವುದು, ಆಗಾಗ ಪ್ಲಾಸ್ಟಿಕ ಸರ್ಜರಿಗೆ ಒಳಗಾಗುವುದು ಇದೆಲ್ಲಾ ಇದರ ಲಕ್ಷಣಗಳು. ಇಂಥವರಿಗೆ ತನ್ನನ್ನು ಆಗಾಗ ಹೇಗೆ ಇಂಪ್ರೆಸ್ ಮಾಡಬೇಕೆಂಬುದೇ ಚಿಂತೆಯಾಗಿರುತ್ತದೆ. ಪುರುಷ ಅರೆನಗ್ನರಾದರೆ ಸ್ತ್ರೀಯರಿಗೆ ಅವರ ದೇಹದಲ್ಲಿ ಆಸಕ್ತಿ, ಆಕರ್ಷಣೆ ಉಂಟಾಗುತ್ತದೆ.ಪುರುಷನ ಅಗಲವಾದ ಎದೆ, ಭುಜ, ಮಾಂಸಖಂಡಗಳಿಂದ ಕೂಡಿದ ತೊಡೆಗೆ ಸ್ತ್ರೀ ಆಕರ್ಷಣೆಗೊಳಗಾಗುತ್ತಾರೆ. ಆದರೆ ಪುರುಷ ಆರಂಭದಿಂದಲೇ ತನ್ನ ದೇಹದ ಬಗ್ಗೆ ಗೌಪ್ಯತೆ ಕಾಪಾಡದ ಕಾರಣ ಇದು ಆತ ಅರೆನಗ್ನರಾದರೆ ಯಾರೂ ಕೂಡಾ ಪ್ರಶ್ನಿಸುವುದಿಲ್ಲ.ಕೆಲವು ಬುಡಕಟ್ಟು ಜನಾಂಗಗಳಲ್ಲಿ ಸ್ತ್ರೀಯರು ಮೇಲ್ವಸ್ತ್ರ ಧರಿಸುವುದಿಲ್ಲ. ಸ್ತ್ರೀಯ ನಗ್ನ ದೇಹ ನೋಡಿದರೂ ಬುಡಕಟ್ಟು ಪುರುಷರಿಗೆ ಏನೂ ಅನಿಸುವುದಿಲ್ಲ. ಯಾಕೆಂದರೆ ಅದು ಅಭ್ಯಾಸವಾಗಿಬಿಡುತ್ತದೆ. ಇದೇ ರೀತಿ ನಾಗರಿಕ ಪ್ರಂಚದಲ್ಲಿ ಬೆಳೆದ ಪುರುಷ ತನ್ನ ದೇಹದ ಬಗ್ಗೆ ಗೌಪ್ಯತೆ ಕಾಪಾಡದ ಕಾರಣ ಇಂದು ಪುರುಷ ಅರೆನಗ್ನರಾದರೆ ಯಾರಿಗೂ ಏನೂ ಅನಿಸುವುದಿಲ್ಲ.ಆದರೆ ಸ್ತ್ರೀ ಮಾತ್ರ ಸಾವಿರಾರು ವರ್ಷಗಳಿಂದ ತನ್ನ ದೇಹದ ಬಗ್ಗೆ ಗೌಪ್ಯತೆ ಕಾಪಾಡುತ್ತಾ ಬಂದಿದ್ದಾಳೆ. ಆಕೆ ಆರಂಭದಿಂದಲೂ ಎದೆಯ ಮೇಲೆ ಅಂಗವಸ್ತ್ರ ಧರಿಸುತ್ತಾ ಬಂದಿರುವುದನ್ನು ರೂಢಿ ಮಾಡಿ ಬಂದಿದ್ದಾಳೆ. ಆದ್ದರಿಂದ ಪುರುಷರಿಗೆ ಆಕೆಯ ಖಾಸಗಿ ದೇಹದ ಮೇಲೆ ಪುರುಷರಿಗೆ ಕುತೂಹ ಇದ್ದೇ ಇರುತ್ತದೆ.ಹಾಗೆಂದು ಅರೆನಗ್ನ ದೇಹ ನೋಡಿದರೆ ಪುರುಷ ಅತ್ಯಾಚಾರ ನಡೆಸುತ್ತಾನೆ ಎಂಬುವುದಕ್ಕೆ ಆಧಾರವಿಲ್ಲ. ಅತ್ಯಾಚಾರ ಎಸಗುವವನು ಮಾನಸಿಕ ದೌರ್ಬಲ್ಯದಿಂದ ತನ್ನನ್ನು ತಾನು ಸಂಯಮವಹಿಸಲು ಸಾಧ್ಯವಾಗದವನು ಈ ರೀತಿ ವಿಕೃತ ಭಾವನೆ ತೋರುತ್ತಾನೆ. ಸ್ತ್ರೀಯನ್ನು ಒಲಿಸಲು ಸಾಧ್ಯವಾಗದ ಒರಟು ವ್ಯಕ್ತಿತ್ವದವ ಮಾತ್ರ ಅತ್ಯಾಚಾರ ಎಸಗುತ್ತಾನೆ. ಆದರೆ ಕೆಲವೊಂದು ಪ್ರಕರಣಗಳಲ್ಲಿ ಹೆಚ್ಚಿನ ಪುರುಷರು ತಾನು ನೀಲಿ ಚಿತ್ರ ನೋಡಿ ಉದ್ರೇಕದಿಂದ ಅತ್ಯಾಚಾರ ಎಸಗಿದ್ದಾನೆ ಎಂದು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಸ್ತ್ರೀ ಮೈಮುಚ್ಚುವ ಉಡುಪು ಧರಿಸಿದರೆ ಆಕೆಗೆ ಕ್ಷೇಮ.ಇನ್ನು ಒಂದು ಸಂಶೋಧನೆಯ ಪ್ರಕಾರ ನೂರು ಮಂದಿ ಪುರುಷರಲ್ಲಿ ಐವತ್ತು ಮಂದಿ ಪುರುಷರು ನಗ್ನರಾಗಿರುವ ಸ್ತ್ರೀಯರ ಚಿತ್ರಗಳನ್ನು ನೋಡಿದರೆ, ನಗ್ನರಾಗಿರುವ ಸ್ತ್ರೀಯರನ್ನು ನೋಡಿದರು ತತ್‍ಕ್ಷಣವೇ ಕಾಮೋದ್ರೇಕಗೊಳ್ಳುತ್ತಾರೆ. ಹಾಗೆಂದು ಅವರು ಅತ್ಯಾಚಾರ ಮಾಡಬೇಕೆಂಬುದಕ್ಕೆ ಆಧಾರವಿಲ್ಲ. ಹಾಗೆ ನೋಡಿದ್ದರೆ ಅತ್ಯಾಚಾರ ವ್ಯಾಪಕವಾಗಿರಬೇಕಾಗಿತ್ತು.ಒಂದು ಸಂಶೋಧನೆಯ ಪ್ರಕಾರ ಶೇಕಡ 10 ಮಂದಿಗಿಂತಲೂ ಕಡಿಮೆ ಸ್ತ್ರೀಯರು ನಗ್ನ ಚಿತ್ರಗಳನ್ನು ನೋಡಿ ಕಾಮಪರವಾದ ಉದ್ರೇಕವನ್ನು ಹೊಂದುತ್ತಾರೆಂದು ಅದು ತಿಳಿಸಿದೆ. ಸ್ತ್ರೀಯ ಚಿತ್ರಗಳನ್ನು ನೋಡಿ ಪುರುಷ ಆಕರ್ಷಕನಾಗುತ್ತಾನೆಂದು ಸೈಕಾಲಜಿ ಪ್ರಕಾರ ಪತ್ರಿಕೆಗಳು, ಸಿನಿಮಾದವರು ಸ್ತ್ರೀಯ ಅರ್ಧ ನಗ್ನತೆಯ ಚಿತ್ರಗಳನ್ನು ಪ್ರಕಟಿಸುತ್ತಾರೆ. ಇದು ಅವರ ವ್ಯಾವಹಾರಿಕ ದೃಷ್ಟಿಕೋನ ಅಷ್ಟೆ. ಆದರೆ ಅದನ್ನು ನೋಡಿ ಸಮಾಜದಲ್ಲಿ ಜೀವಿಸುವ ನಾವು ಅವುಗಳನ್ನು ಅನುಸರಿಸಬೇಕಾಗಿಲ್ಲ.ಆದ್ದರಿಂದ ಸ್ತ್ರೀಯರು ಮೈಮುಚ್ಚುವ, ಬೇರೆಯವರು ಆರಾಧಿಸುವ ಮನೋಭಾವದ ಉಡುಪನ್ನು ಧರಿಸುವುದೇ ಸೂಕ್ತ. ಸ್ತ್ರೀ ಸಬಲೆ ಎಂದು ತಾನು ತೊಡುವ ಉಡುಪಿನಿಂದ ತೋರಿಸಬೇಕಾಗಿಲ್ಲ. ಆಕೆ ವೈಜ್ಞಾನಿಕ ಮನೋಭಾವವನ್ನು ಹೊಂದಿ, ಅದಕ್ಕೆ ತಕ್ಕಂತೆ ವರ್ತಿಸಿದರೆ ಆಕೆ ಸಮಾಜದಲ್ಲಿ ಮುಂದುವರಿಯಲು ಸಾಧ್ಯ.
No comments:
Post a Comment